ಅಭಿಪ್ರಾಯ / ಸಲಹೆಗಳು

ಇಲಾಖಾ ಪರಿಚಯ

                             

ಕರ್ನಾಟಕ ಸರ್ಕಾರ

ಸಾರ್ವಜನಿಕ ಗ್ರಂಥಾಲಯ ಇಲಾಖೆ

 

ಕರ್ನಾಟಕ  ಸಾರ್ವಜನಿಕ ಗ್ರಂಥಾಲಯ ಕಾಯ್ದೆ 1965 ರ ಅನ್ವಯ ರಾಜ್ಯದ ಸಮಗ್ರವಾಗಿ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆಯನ್ನು ಕಾರ್ಯ ರೂಪಕ್ಕೆ ತರಲಾಗಿದೆ.  ರಾಜ್ಯ ಮಟ್ಟದಲ್ಲಿ ರಾಜ್ಯ ಕೇಂದ್ರ ಗ್ರಂಥಾಲಯ, ಒಂದು ಲಕ್ಷ ಜನ ಸಂಖ್ಯೆಗಿಂತ ಹೆಚ್ಚಿನ ಜನಸಂಖ್ಯೆ ಹೊಂದಿದ ಪ್ರತಿಯೊಂದು ನಗರದಲ್ಲಿ ನಗರ ಕೇಂದ್ರ ಗ್ರಂಥಾಲಯ ಹಾಗೂ ಶಾಖಾ ಗ್ರಂಥಾಲಯಗಳು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ, ತಾಲ್ಲೂಕು ಕೇಂದ್ರ, ಪುರಸಭೆ ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮೀಣ ಗ್ರಂಥಾಲಯಗಳು ಹಾಗೂ ಅಲೆಮಾರಿ ಮತ್ತು ಕೊಳಚೆ ಪ್ರದೇಶ ಸ್ಥಳಗಳಲ್ಲಿ ಅಲೆಮಾರಿ ಹಾಗೂ ಕೊಳಚೆ ಪ್ರದೇಶ ಗ್ರಂಥಾಲಯಗಳು ಹಾಗೂ ಮಕ್ಕಳಿಗಾಗಿ ಸಮುದಾಯ ಮಕ್ಕಳ ಗ್ರಂಥಾಲಯಗಳು ಕಾರ್ಯ ನಿರತವಾಗಿವೆ.

ಸಾರ್ವಜನಿಕ ಗ್ರಂಥಾಲಯ ಚಟುವಟಿಕೆಗಳನ್ನು ಈ ಕೆಳಕಂಡಂತೆ ವಿಂಗಡಿಸಿದೆ:

ರಾಜ್ಯ ಕೇಂದ್ರ ಗ್ರಂಥಾಲಯ : ರಾಜ್ಯ ಕೇಂದ್ರ ಗ್ರಂಥಾಲಯವು ಎಲ್ಲಾ ಭಾಷೆ ಹಾಗೂ ವಿಷಯಗಳ ಆಕರ ಗ್ರಂಥಗಳನ್ನು ಹಾಗೂ ಆಧುನಿಕ ಸಲಕರಣೆಗಳನ್ನು ಹೊಂದಿ ಒಂದು ಉತ್ತಮ “ಪರಾಮರ್ಶನ” ಗ್ರಂಥಾಲಯವಾಗಿದೆ.  ಗ್ರಂಥಸ್ವಾಮ್ಯ, ಕಂಪ್ಯೂಟರ್, ಅಂತರ್ಜಾಲ ವಿಭಾಗ, ಅಂಧರಿಗಾಗಿ ಬ್ರೈಲ್ ಲಿಪಿಯ ಪುಸ್ತಕಗಳು, ಉದ್ಯೋಗ ಮಾಹಿತಿ ಹಾಗೂ ನಿಯತಕಾಲಿಕೆಗಳ ವಿಭಾಗಗಳು ಈ ಗ್ರಂಥಾಲಯದ ಪ್ರಮುಖ ವಿಭಾಗಗಳಾಗಿವೆ.

ನಗರ ಕೇಂದ್ರ ಗ್ರಂಥಾಲಯಗಳು : ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ 1965 ರ ಅಡಿಯಲ್ಲಿ ರಾಜ್ಯದ 26 ನಗರ ಕೇಂದ್ರ ಗ್ರಂಥಾಲಯಗಳನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡಲಾಗುತ್ತಿದೆ.  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಕೇಂದ್ರ ಎಂದು ಐದು ವಲಯಗಳನ್ನಾಗಿ ವಿಂಗಡಿಸಲಾಗಿದೆ ಹಾಗೂ ಬೆಂಗಳೂರು ನಗರ ವ್ಯಾಪ್ತಿಯ 198 ವಾರ್ಡ್ ಗಳಲ್ಲಿ ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಗ್ರಂಥಾಲಯ ಸೇವೆಯನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ.

 

ಜಿಲ್ಲಾ ಕೇಂದ್ರ ಗ್ರಂಥಾಲಯಗಳು : ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ 1965, 16(1) (ಬಿ) ಪ್ರಕರಣದ ಅನ್ವಯ 30 ಜಿಲ್ಲಾ ಕೇಂದ್ರ ಗ್ರಂಥಾಲಯಗಳಲ್ಲಿ 703 ಶಾಖೆಗಳು, ತಾಲ್ಲೂಕು ಮಟ್ಟದಲ್ಲಿ ಓದುಗರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿವೆ.  ನಗರ ಕೇಂದ್ರ ಗ್ರಂಥಾಲಯಗಳಿರುವ ಎಲ್ಲಾ ಕೇಂದ್ರ ಸ್ಥಳಗಳಲ್ಲಿ ಜಿಲ್ಲಾ ಗ್ರಂಥಾಲಯಗಳ ಆಡಳಿತ ಕಛೇರಿಗಳನ್ನು ಮಾತ್ರ ಹೊಂದಿರುತ್ತದೆ.

ಸಂಚಾರಿ ಗ್ರಂಥಾಲಯಗಳು : ಇಲಾಖೆಯ ಜನಪ್ರಿಯ ಸೇವಾ ಕಾರ್ಯಕ್ರಮದಲ್ಲಿ ಒಂದಾದ ಸಂಚಾರಿ ಗ್ರಂಥಾಲಯಗಳು ರಾಜ್ಯದ ಓದುಗ ಸಮುದಾಯದ ಮನೆ ಬಾಗಿಲಲ್ಲೇ ತನ್ನ ಸೇವೆಯನ್ನು ಒದಗಿಸುತ್ತಿದೆ.   ರಾಜ್ಯದಲ್ಲಿ ಒಟ್ಟು 13 ಸಂಚಾರಿ ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿವೆ.

ಗ್ರಾಮ ಪಂಚಾಯಿತಿ ಗ್ರಂಥಾಲಯಗಳು : ಗ್ರಾಮೀಣ ಜನತೆ ಸಮಯವನ್ನು ಸಾರ್ಥಕವಾಗಿ ಸದುಪಯೋಗ ಪಡಿಸಿಕೊಳ್ಳಲು ಪುಸ್ತಕಗಳ ಮೂಲಕ ಜ್ಞಾರ್ನಾಜನೆ ಮಾಡಿಕೊಳ್ಳಲು, ನಿರಂತರ ಕಲಿಕೆಯನ್ನು ಹೊಂದಲು ಗ್ರಾಮ ಪಂಚಾಯತಿ ಗ್ರಂಥಾಲಯಗಳು ನೆರವಾಗುತ್ತಿವೆ.  ರಾಜ್ಯದಲ್ಲಿ ಒಟ್ಟು 5766 ಗ್ರಾಮ ಪಂಚಾಯತಿ ಗ್ರಂಥಾಲಯಗಳು ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯ ನಿರತವಾಗಿರುತ್ತದೆ.  ಸರ್ಕಾರದ ಆದೇಶ ಸಂ. ಇಡಿ 64 ಎಲ್ಐಬಿ 2015, ಬೆಂಗಳೂರು ದಿಃ 26-2-2019 ರನುಸಾರ ಗ್ರಾಮ ಪಂಚಾಯತಿ ಗ್ರಂಥಾಲಯಗಳ ಸಂಪೂರ್ಣ ನಿರ್ವಹಣೆಯನ್ನು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸಲಾಗಿರುತ್ತದೆ.  ಮುಂದುವರೆದು, ದಿನಾಂಕ 17-8-2019 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನಾ ಸಭೆಯ ನಡವಳಿಯನುಸಾರ ಗ್ರಾಮ ಪಂಚಾಯತಿ ಗ್ರಂಥಾಲಯಗಳ ಹಸ್ತಾಂತರ ಪ್ರಕ್ರಿಯೆ ಜಾರಿಯಲ್ಲಿರುತ್ತದೆ.

ಇಂದಿರಾ ಪ್ರಿಯದರ್ಶಿನಿ ಮಕ್ಕಳ ಗ್ರಂಥಾಲಯ : ಮಕ್ಕಳಿಗಾಗಿ ಇಂದಿರಾ ಪ್ರಿಯದರ್ಶಿನಿ ಮಕ್ಕಳ ಗ್ರಂಥಾಲಯವನ್ನು 1994 ರಲ್ಲಿ ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ ಸ್ಥಾಪಿಸಲಾಗಿದ್ದು, ಇದನ್ನು ಮಕ್ಕಳ ಉಪಯುಕ್ತ ಗ್ರಂಥಗಳ ಅಗರವಾಗಿ ಬೆಳೆಸಲು ಉದ್ದೇಶಿಸಲಾಗಿದೆ.  ಎಲ್ಲಾ ಜಿಲ್ಲಾ ಮತ್ತು ನಗರ ಕೇಂದ್ರ ಗ್ರಂಥಾಲಯಗಳಲ್ಲಿ ಮಕ್ಕಳ ವಿಭಾಗಗಳಿದ್ದು, ಮಕ್ಕಳಿಗೆ ಉಪಯುಕ್ತ ಪುಸ್ತಕಗಳು ಹಾಗೂ ನಿಯತಕಾಲಿಕೆಗಳನ್ನು ಒದಗಿಸುತ್ತಿವೆ.

ಸಮುದಾಯ ಮಕ್ಕಳ ಕೇಂದ್ರಗಳು : ರಾಜ್ಯದ 30 ಜಿಲ್ಲಾ ಕೇಂದ್ರಗಳಲ್ಲಿ 31 ಸಮುದಾಯ ಮಕ್ಕಳ ಕೇಂದ್ರಗಳು ಕಾರ್ಯ ನಿರ್ವಹಿಸುತ್ತವೆ.  ಈ ಕೇಂದ್ರಗಳಲ್ಲಿ ಮಕ್ಕಳಿಗಾಗಿ ಪುಸ್ತಕ ವಿಭಾಗ, ಕಂಪ್ಯೂಟರ್ ವಿಭಾಗ, ಮನರಂಜನೆಗಾಗಿ ಆಟದ ಸಾಮಾನುಗಳು ವಿಭಾಗಗಳ ವ್ಯವಸ್ಥೆ ಮಾಡಲಾಗಿದೆ.  ಈ ಕೇಂದ್ರದ ಒಳಾಂಗಣವನ್ನು ಮಕ್ಕಳಿಗೆ ಮುದ ನೀಡುವ ರೀತಿಯಲ್ಲಿ ಅಲಂಕರಿಸಲಾಗಿದೆ.  ಈ ಕೇಂದ್ರಗಳಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾದಂತಹ ವ್ಯವಸ್ಥೆಯನ್ನು ಮಾಡಲಾಗಿದೆ.

ಅಲೆಮಾರಿ ಮತ್ತು ಕೊಳಚೆ ಪ್ರದೇಶದ ಜನಾಂಗದವರಿಗೆ ಗ್ರಂಥಾಲಯಗಳು : 127 ಅಲೆಮಾರಿ ಮತ್ತು 100 ಕೊಳಚೆ ಪ್ರದೇಶದ ಗ್ರಂಥಾಲಯಗಳನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಒಟ್ಟು 227 ಗ್ರಂಥಾಲಯಗಳನ್ನು ಪ್ರಾರಂಭ ಮಾಡಲಾಗಿದೆ.  ಸದರಿ ಗ್ರಂಥಾಲಯಗಳಿಗೆ ಪುಸ್ತಕ, ದಿನಪತ್ರಿಕೆ, ನಿಯತಕಾಲಿಕೆ ಮತ್ತು ಪೀಠೋಪಕರಣಗಳನ್ನು ಸರಬರಾಜು ಮಾಡಿ ಮೇಲ್ವಿಚಾರಕರ ಗೌರವಧನವನ್ನು ಸರ್ಕಾರದ ಆದೇಶದನ್ವಯ ಹೆಚ್ಚಿಸಿ ಗ್ರಂಥಾಲಯಗಳ ಅಭಿವೃದ್ಧಿಯನ್ನು ಸಾಧಿಸಲು ಕ್ರಮ ಕೈಗೊಳ್ಳಲಾಗಿದೆ.

ಗ್ರಂಥಾಲಯಗಳ ಆಧುನೀಕರಣ :  2018-19ನೇ ಸಾಲಿನ ಆಯ-ವ್ಯಯ ಘೋಷಣೆ ಸಂ. 113 ರಲ್ಲಿ ರಾಜ್ಯ ಕೇಂದ್ರ ಗ್ರಂಥಾಲಯ ಶತಮಾನೋತ್ಸವ ಸ್ಮರಣಾರ್ಥವಾಗಿ 30 ಜಿಲ್ಲಾ 26 ನಗರ ಮತ್ತು 216 ತಾಲ್ಲೂಕ್ ಸಾರ್ವಜನಿಕ ಗ್ರಂಥಾಲಯಗಳನ್ನು ಡಿಜಿಟಲ್ ಗ್ರಂಥಾಲಯಗಳನ್ನಾಗಿ ಮೇಲ್ದರ್ಜೆಗೇರಿಸುವುದು, ಪ್ರಪ್ರಥಮ ಬಾರಿಗೆ ಅಂತರ್ಜಾಲದ ಕ್ಲೌಡ್ ಮೂಲಕ ರಾಜ್ಯದಲ್ಲಿರುವ ಸರ್ಕಾರಿ ಪ್ರೌಢ ಶಾಲೆಗಳಿಗೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಸಂಪರ್ಕ ನೀಡಿ ಅಂದಾಜು 10 ಲಕ್ಷ ವಿದ್ಯಾರ್ಥಿಗಳಿಗೆ ಡಿಜಿಟಲ್ ಗ್ರಂಥಾಲಯ ಸೌಲಭ್ಯವನ್ನು ಒದಗಿಸಲಾಗಿದೆ.

ಪುಸ್ತಕ ಆಯ್ಕೆ ಮತ್ತು ಖರೀದಿ ವಿಧಾನ :  ಸಾರ್ವಜನಿಕ ಗ್ರಂಥಾಲಯ ಇಲಾಖೆ ತನ್ನ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಾಲಯಗಳಿಗೆ ಪುಸ್ತಕಗಳ ಆಯ್ಕೆ ಹಾಗೂ ಖರೀದಿಗೆ ಸಂಬಂಧಿಸಿದಂತೆ ಸಮಗ್ರವಾದ ನೀತಿಯನ್ನು ರೂಪಿಸಿ ಸರ್ಕಾರದ ಆದೇಶ ಸಂ. ಇಡಿ ಎಲ್ಐಬಿ 2004 ದಿಃ 07-02-2005 ರಂತೆ ವಿವಿಧ ಲೇಖಕ / ಪ್ರಕಾಶಕ / ಪ್ರಕಟನಾ ಸಂಸ್ಥೆಗಳಿಂದ ಪುಸ್ತಕಗಳನ್ನು ಖರೀದಿಸಲಾಗುತ್ತಿದೆ.

ರಾಜಾ ರಾಮ್ ಮೋಹನ್ ರಾಯ್ ಗ್ರಂಥಾಲಯ ಪ್ರತಿಷ್ಠಾನ :  1973 ರಲ್ಲಿ ಸ್ಥಾಪನೆಯಾದ ರಾಜಾ ರಾಮ್ ಮೋಹನ್ ರಾಯ್ ಪ್ರತಿಷ್ಠಾನ ದೇಶಾದ್ಯಂತ ಜನರಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಸಾರ್ವಜನಿಕ ಗ್ರಂಥಾಲಯ ಚಳುವಳಿಗೆ ಒತ್ತಾಸೆ ನೀಡಿ ಅದನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಸಾಧಿಸುತ್ತಿದೆ.   ಪ್ರತಿಷ್ಠಾನ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಗ್ರಂಥಾಲಯ ಸೇವೆಯಲ್ಲಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆಗಳು, ವಯಸ್ಕರ ಶಿಕ್ಷಣ ಹಾಗೂ ಇಂತಹ ಇತರ ಸಂಘ ಸಂಸ್ಥೆಗಳಿಗೆ ಸಮಪಾಲು ನಿಧಿ ಮತ್ತು ಹೊಂದಾಣಿಕೇತರ ನಿಧಿ ಯೋಜನೆ ಅಡಿಯಲ್ಲಿ ಅನುದಾನ ಒದಗಿಸುವ ಮೂಲಕ ತನ್ನ ಗುರಿಯನ್ನು ಸಾಧಿಸುತ್ತಿದೆ.  ಕರ್ನಾಟಕ ರಾಜ್ಯದಲ್ಲಿ ಸರ್ಕಾ 1973 ರಿಂದಲೂ ಪ್ರತಿಷ್ಠಾನದ ನೆರವಿನ ಯೋಜನೆಗಳಿಂದ ಗ್ರಾಮೀಣ ಗ್ರಂಥಾಲಯಗಳ ಅಭಿವೃದ್ಧಿಗೆ ಸಹಾಯ ಪಡೆಯುತ್ತಿದೆ.   ಸಾಕಷ್ಟು ಸಂಖ್ಯೆಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ಸ್ವಯಂ ಸೇವಾ ಸಂಸ್ಥೆಗಳು ಸಹ ಹೊಂದಾಣಿಕೇತರ ಯೋಜನೆ ಅಡಿ ಧನ ಸಹಾಯ ಪಡೆದು ಗ್ರಂಥಾಲಯಗಳಿಗೆ ಪುಸ್ತಕ, ಪೀಠೋಪಕರಣ, ಕಟ್ಟಡ ಮುಂತಾದವುಗಳಿಗೆ ಧನ ಸಹಾಯ ಪಡೆದಿವೆ.  ಪ್ರತಿಷ್ಠಾನದ ಯೋಜನೆಗಳು ಕೆಳಕಂಡಂತಿವೆ.

 • ಪುಸ್ತಕಗಳ ಖರೀದಿ
 • ಮಹಿಳಾ ವಿಭಾಗ / ಸಂಚಾರಿ ಗ್ರಂಥಾಲಯ ಸೇವೆ
 • ಗ್ರಂಥಾಲಯ ಕಟ್ಟಡಗಳು
 • ಆಧುನಿಕ ಗ್ರಂಥಾಲಯ ಸೇವೆ
 • ಸಮ್ಮೇಳನಗಳು
 • ಪುಸ್ತಕ ಪ್ರದರ್ಶ ಮತ್ತು ಗ್ರಂಥಾಲಯಗಳ ಜಾಗೃತಿ

 

 

                          

ಇತ್ತೀಚಿನ ನವೀಕರಣ​ : 05-09-2020 03:49 PM ಅನುಮೋದಕರು: Shilpa C V


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಾರ್ವಜನಿಕ ಗ್ರಂಥಾಲಯ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080